ad

Tuesday 26 January 2021

ಬುರ್ಜ್ ಖಲೀಫಾಗೆ ಹೊರಟ ಬಾದ್ ಶಾ..!!

ವಿಕ್ರಾಂತ್ ರೋಣ ದೇಶದಾದ್ಯಂತ ಸುದ್ಧಿಯಲ್ಲಿದ್ದಾನೆ.
ಖಡಕ್ ಪೋಲಿಸ್ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೂ ಈಗ ಅಭಿನಯ ಚಕ್ರವರ್ತಿ ಹಾಗೂ ಅನೂಪ್ ಭಂಡಾರಿ ಯವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರೋ ವಿಕ್ರಾಂತ್ ರೋಣ ಕೇವಲ ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಬಹುಬೇಡಿಕೆಯ ಚಿತ್ರವಾಗಿದೆ.

ಇದೇ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಟೈಟಲ್ ಹಾಗೂ ಸ್ನೀಕ್ ಪೀಕ್ ಬಿಡುಗಡೆ ಮಾಡಿದಂತಹ ಪ್ರಪಂಚದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ.

ಸ್ವತಃ ಕಿಚ್ಚ ಸುದೀಪ್ ರವರೇ ಹೇಳುವಂತೆ ನಿರ್ಮಾಪಕ ಹಾಗೂ ಅವರ ಸ್ನೇಹಿತರಾದ ಜಾಕ್ ಮಂಜುನಾಥ್ ರವರ ದೃಢ ನಿರ್ಧಾರ ಚಿತ್ರ ಈ ಮಟ್ಟಕ್ಕೆ  ಬರುವಲ್ಲಿ ಮುಖ್ಯ ಕಾರಣ ಎಂದಿದ್ದಾರೆ.

ಬುರ್ಜ್ ಖಲೀಫಾದಲ್ಲಿ ಕಾರ್ಯಕ್ರಮ ನಡೆಯಲು 5 ದಿನಗಳು ಬಾಕಿ ಇರುವಂತೆಯೇ ಕಿಚ್ಚ ಸುದೀಪ್ ರವರು ತಂಡದೊಂದಿಗೆ ದುಬೈಗೆ ಹೊರಟಿದ್ದಾರೆ.
 
 

ಜನವರಿ 31 ರಂದು ಕನ್ನಡದ ಹೆಮ್ಮೆ ಜಗತ್ತಿನಲ್ಲೇ ಅತ್ಯಂತ ಎತ್ತರದ ಕಟ್ಟಡದ ಮೇಲೆ ಅನಾವರಣಗೊಳ್ಳುವುದನ್ನು ನೋಡಲು ಕೋಟ್ಯಂತರ ಜನರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Friday 22 January 2021

ಬಿಗ್ ಬಾಸ್ ಗೆ ಕಾಲಿಡೋಕೆ ವಿಕ್ರಾಂತ್ ರೋಣ ರೆಡಿ..!!

ವಿಶ್ವಾದ್ಯಂತ ವಿಕ್ರಾಂತ್ ರೋಣ ಜ್ವರ ಜೋರಾಗಿದ್ದರೆ ಇತ್ತ ಕಿಚ್ಚನ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ರೆಡಿಯಾಗ್ತಿದೆ.

ಕಿಚ್ಚ ಕನ್ನಡ ಕಂಡ ಸ್ಟಾರ್ ಹೋಸ್ಟ್.
ಇಲ್ಲಿಯವರೆಗೆ ಯಾವ ಭಾಷೆಯಲ್ಲಿ ಸಹ ಬಿಗ್ ಬಾಸ್ ನ ಹೋಸ್ಟ್ ಆಗಿ ಇಷ್ಟೊಂದು ಸೀಸನ್ ಹೋಸ್ಟ್ ಮಾಡಿಲ್ಲ.

ಈಗ ಕಿಚ್ಚ ಸುದೀಪ್ 1 ವರ್ಷದ ವಿರಾಮದ ನಂತರ ಚಿಕ್ಕಪರದೆಯ ದೊಡ್ಡ ಶೋ ಬಿಗ್ ಬಾಸ್ ನ ಬಿಗ್ " ಬಾಸ್ " ಮರುಕಳಿಸಲು ಸಜ್ಜಾಗಿದೆ.

ಕಿಚ್ಚ ಸುದೀಪ್ ರವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಂದ " ವಿಕ್ರಾಂತ್ ರೋಣಕ್ಕೆ ತೋರಿಸಿದ ನಿಮ್ಮ ಪ್ರೀತಿಗೆ ಧನ್ಯವಾದಗಳು, ಈಗ ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟಿಂಗ್ ನಲ್ಲಿದ್ದೇನೆ " ಎಂದು ಹಂಚಿಕೊಂಡರು.

ಕನ್ನಡದಲ್ಲಿ ಬಿಗ್ ಬಾಸ್ ಗೆ ಜನಪ್ರಿಯತೆ ಬರಲು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
ವೀಕ್ಷಕರು ಸ್ಪರ್ಧಿಗಳನ್ನು ವೀಕ್ಷಿಸಲು ಬಿಗ್ ಬಾಸ್ ನೋಡದಿದ್ದರೂ , ಕಿಚ್ಚ ಸುದೀಪ್ ರವರ ಸ್ಟೈಲಿಶ್ ಹೋಸ್ಟಿಂಗ್ ನೋಡೋದಕ್ಕಾದ್ರೂ ನೋಡೇ ನೋಡ್ತಾರೆ.

ಮೂಲಗಳ ಪ್ರಕಾರ ಬಿಗ್ ಬಾಸ್ ನ 8ನೇ ಅವತರಣಿಕೆ ಇದೇ ಫೆಬ್ರವರಿಯ 3ನೇ ವಾರದಿಂದ ಪ್ರಾರಂಭವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.ಬಿಗ್ ಬಾಸ್ ಈ ಬಾರಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ದೊಡ್ಡ ಪರದೆಯಿರಲೀ ಇಲ್ಲ ಚಿಕ್ಕ ಪರದೆಯಿರಲಿ ಕಿಚ್ಚ ಸುದೀಪ್ ತಾವು ಎಂದೆಂದಿಗೂ ಬಿಗ್ ಬಾಸ್ ಎಂದು ಸಾಬೀತು ಪಡಿಸಿದ್ದಾರೆ.

ಕಿಚ್ಚನಿಗೆ 2000 ಅಡಿ ಕಟೌಟ್ ರೆಡಿ...!!!

ಫ್ಯಾಂಟಮ್ ವಿಕ್ರಾಂತ್ ರೋಣ ಆದ ಮೇಲೆ ಕಿಚ್ಚನದ್ದೇ ಸುದ್ದಿ ಇಡೀ ದೇಶದಲ್ಲಿ.

ಈಗಾಗಲೇ ವಿಕ್ರಾಂತ್ ರೋಣದ  ಟೈಟಲ್ ಲೋಗೋ ಹಾಗೂ ಚಿತ್ರದ 3ನಿಮಿಷದ ಟೀಸರ್ ನ್ನು ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡುತ್ತಿರುವ ಪ್ರಪಂಚದ ಮೊದಲ ಚಿತ್ರವಾಗೋಕೆ ಹೊರಟಿದೆ.

ಕನ್ನಡ ಚಿತ್ರರಂಗದ ಈ ಹಂತದ ಬೆಳವಣಿಗೆ ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಬೆಳವಣಿಗೆಯನ್ನು ಸೂಚಿಸಿದೆ.

ಬುರ್ಜ್ ಖಲೀಫಾದಲ್ಲಿ ಚಿತ್ರದ ಅಪ್ಡೇಟ್ ನ್ನು ಬಿಡುಗಡೆ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ.
ಆದರೆ ಕಿಚ್ಚ ಸುದೀಪ್ ನೇತೃತ್ವದ ವಿಕ್ರಾಂತ್ ರೋಣ , ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಇದನ್ನು ಸಾಧಿಸುತ್ತಿದೆಯೆಂದರೆ ಅದು ನಾವೆಲ್ಲ ಕನ್ನಡಿಗರು ಹೆಮ್ಮೆ ಪಡೋ ವಿಚಾರ.

ಇದು ಮಾತ್ರವಲ್ಲದೇ ದುಬೈನ ಬುರ್ಜ್ ಖಲೀಫಾದ ಕಟ್ಟಡದ Display ಮೇಲೆ ಕಿಚ್ಚನ 2000 ಅಡಿಗೂ ಎತ್ತರದ ಕಟೌಟ್ ಇದೇ ಡಿಸೆಂಬರ್ 31ರಂದು ಕಿಚ್ಚ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅನಾವರಣಗೊಳ್ಳುತ್ತಿರುವುದನ್ನು ನೋಡಲು ಎಲ್ಲಾ ಕನ್ನಡಿಗರ ಮಾತ್ರವಲ್ಲದೇ ಇಡೀ ಸಿನಿಜಗತ್ತು ಕಾಯುತ್ತಿದೆ.

Thursday 21 January 2021

ವಿಕ್ರಾಂತ್ ರೋಣ ಬುರ್ಜ್ ಖಲೀಫಾದ ಬಾದ್ ಶಾ ..!!

ಕಡೆಗೂ ಇಡೀ ಸಿನಿಜಗತ್ತೇ ತುದಿಗಾಲಿನಲ್ಲಿ ಕಾದುಕುಳಿತಿದ್ದ ಆ ಕ್ಷಣ ಬಂದೇ ಬಿಟ್ಟಿದೆ.

ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ಚಿತ್ರ ಫ್ಯಾಂಟಮ್ ಈಗ ವಿಕ್ರಾಂತ್ ರೋಣ ಆಗಿ ಬದಲಾಗಿದೆ.

ಅಲ್ಲದೇ ಚಿತ್ರತಂಡ ಚಿತ್ರದ ಟೈಟಲ್ ಲೋಗೋ ಹಾಗೂ ಮೂರು ನಿಮಿಷದ ಝಲಕ್ ನ್ನು ಬುರ್ಜ್ ಖಲಿಫಾದಲ್ಲಿ ಬಿಡುಗಡೆ ಮಾಡಲಿದೆ.
ಹಾಗೂ ಈ ಸಾಧನೆ ಮಾಡಿದ ವಿಶ್ವದ ಮೊದಲ ಚಿತ್ರವಾಗಿದೆ.

ಕನ್ನಡಿಗರು ಮಾತ್ರವಲ್ಲದೇ, ಇಡೀ ಭಾರತೀಯರು ಹೆಮ್ಮೆ ಪಡಲೇಬೇಕಾದ ವಿಚಾರ ಏಕೆಂದರೆ ಜಾಗತಿಕವಾಗಿ ಕನ್ನಡ ಚಿತ್ರವೊಂದು ಇಂತಹ ಮಹೋನ್ನತ ಸಾಧನೆ ಮಾಡಿರೋದು ಸಣ್ಣ ವಿಚಾರವಲ್ಲ.

ಕೇವಲ ಶಾರುಖ್ ಖಾನ್ ಜನ್ಮದಿನದ ವಿಶ್ ಗಷ್ಟೇ ಮೀಸಲಾಗಿದ್ದ ಬುರ್ಜ್ ಖಲೀಫಾದಲ್ಲಿ ಕನ್ನಡ ಬಾದ್ ಶಾ ಕಿಚ್ಚ ಸುದೀಪ್ ಕನ್ನಡ ಬಾವುಟವನ್ನು ಪ್ರಪಂಚದ ಅತ್ಯಂತ ಎತ್ತರದ ಕಟ್ಟಡದಲ್ಲಿ ಇದೇ ಜನವರಿ 31ರಂದು ನೆಡೋದನ್ನು ನೋಡಲು ಜಗತ್ತಿನಾದ್ಯಂತ ಕನ್ನಡಿಗರು ಕಾತರರಾಗಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ ಚಿತ್ರ ಈಗಾಗಲೇ ಪ್ಯಾನ್ ವರ್ಲ್ಡ್ ಚಿತ್ರವಾಗಿ ವಿಶ್ವಾದ್ಯಂತ ಸಿನಿಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಸಿದ್ಧವಾಗಿದೆ.

ಚಿತ್ರಕ್ಕೆ ಜಾಕ್ ಮಂಜುನಾಥ್ ಗೌಡ ನಿರ್ಮಾಪಕರಾಗಿದ್ದರೆ, ಅಲಂಕಾರ್ ಪಾಂಡಿಯನ್ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ರವರ ನೆಕ್ಸ್ಟ್ ಲೆವೆಲ್ ಮ್ಯೂಸಿಕ್ ಚಿತ್ರಕ್ಕಿದ್ದು.

ಇದೇ ಜನವರಿ 31ಕ್ಕೆ ಎಲ್ಲಾ ಕನ್ನಡಿಗರು ಮಾತ್ರವಲ್ಲದೇ, ಇಡೀ ಇಂಡಿಯಾದ ಕಣ್ಣು ಬುರ್ಜ್ ಖಲೀಫಾದ ಮೇಲೆ ನೆಟ್ಟಿದೆ.

Wednesday 20 January 2021

ಭಜರಂಗಿಯ ಅಬ್ಬರ ಫೆಬ್ರವರಿಗೆ ಶುರುವಾಗಲಿದೆ..!!

ಈಗಾಗಲೇ ಭಜರಂಗಿ ಬಿಡುಗಡೆಯಾಗಿ ಎ ಹರ್ಷರವರ ನಿರ್ದೇಶನದ ನಿಪುಣತೆಯನ್ನು ಹಾಗೂ ಶಿವಣ್ಣನ ನಟನೆಯಯನ್ನು ಎಲ್ಲಾ ಕನ್ನಡಿಗರು ಮೆಚ್ಚಿ ಚಿತ್ರ ಬ್ಲಾಕ್ ಬಸ್ಟರ್ ಫಲಿತಾಂಶವನ್ನು ಬಾಕ್ಸ್ ಆಫೀಸ್ ನಲ್ಲಿ ದಾಖಲಿಸಿತ್ತು.

ಈಗ ಅದೇ ಜೋಡಿ ಮತ್ತೊಮ್ಮೆ ಬ್ಲಾಕ್ ಬಸ್ಟರ್ ಇತಿಹಾಸವನ್ನು ಮರುಕಳಿಸಲು ಈಗ ಒಂದಾಗಿದೆ.

ಶಿವಣ್ಣ - ಎ ಹರ್ಷ ರವರ ಜೋಡಿ ಒಂಥರಾ ಅಭಿಮಾನಿಗಳಿಗೆ ಅದು ಇಷ್ಟ  
ಏಕೆಂದರೆ ಶಿವಣ್ಣ ರವರ ಮಾಸ್ ಅಭಿಮಾನಿಗಳ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ ಎ ಹರ್ಷ ರವರು ಅಭಿಮಾನಿಗಳ ನೆಚ್ಚಿನ ನಿರ್ದೇಶಕರಾಗಿದ್ದಾರೆ.

ಈಗಾಗಲೇ ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿ ಚಿತ್ರದ ತಾಕತ್ತನ್ನು ಎಲ್ಲರೆದುರು ತೋರಿಸಿದ್ದು, ಅರ್ಜುನ್ ಜನ್ಯ ರವರ ಹಿನ್ನೆಲೆ ಸಂಗೀತ, ನೆಕ್ಸ್ಟ್ ಲೆವೆಲ್ ಸಿನಿಮಾಟೋಗ್ರಾಫಿಂಗ್ , ಎ ಹರ್ಷರವರ ಕಲ್ಪನೆಯ ಜಗತ್ತಿನ ಅನಾವರಣ ಹಾಗೂ ಶಿವಣ್ಣ ರವರ ಎನರ್ಜಿ , ಈ ಎಲ್ಲಾ ಅಂಶಗಳು ಭಜರಂಗಿ 2 ಚಿತ್ರದ ಟೀಸರ್ ಈಗಾಗಲೇ ಸಿನಿಪಂಡಿತರ ಹಾಗೂ ಸಿನಿಪ್ರೇಕ್ಷಕರ ಮನಗೆದ್ದು ಮಿಂಚುತ್ತಿದೆ.
ಈಗ ಚಿತ್ರತಂಡ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಟ್ರ್ಯಾಕ್ ನ್ನು ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡೋದಾಗಿ ಹೇಳಿದೆ.

ಚಿತ್ರದ ಕುರಿತಂತೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಪರಭಾಷಾ ಚಿತ್ರರಂಗದಲ್ಲಿ ಕೂಡ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

ಇದಕ್ಕೆ ಮುಖ್ಯ ಕಾರಣ ಹಲವಾರು ವರ್ಷಗಳ ನಂತರ ಮತ್ತೆ ಒಂದಾಗಿರೋ ಸೂಪರ್ ಹಿಟ್ ಹೀರೋ ನಿರ್ದೇಶಕ ಜೋಡಿ ಶಿವಣ್ಣ ಹಾಗೂ ಎ ಹರ್ಷ ರವರ ಕಾಂಬಿನೇಷನ್ ಮತ್ತೆ ಬಾಕ್ಸ್ ಆಫೀಸ್ ಧೂಳೀಪಟ ಮಾಡೋದಂತೂ ಖಂಡಿತ 

ವಿಕ್ರಾಂತ್ ರೋಣ ಗ್ರ್ಯಾಂಡ್ ಎಂಟ್ರಿ ನಾಳೆಗೆ...!!

ಕೇವಲ 2 ವೀಡಿಯೋ ತುಣುಕು ಹಾಗೂ ಪೋಸ್ಟರ್ ಮೂಲಕ ಇಡೀ ಚಿತ್ರ ಜಗತ್ತನ್ನೇ ಕುತೂಹಲದಿಂದ ಕಾಯುವಂತೆ ಮಾಡುತ್ತಿರುವ ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನ ಫ್ಯಾಂಟಮ್ ಚಿತ್ರದ ಅತೀದೊಡ್ಡ ಅಪ್ಡೇಟ್ ನಾಳೆ ಸಂಜೆ 4.03ಕ್ಕೆ ಬಿಡುಗಡೆಯಾಗಲಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಈ ಚಿತ್ರ ಈಗಾಗಲೇ ಪ್ಯಾನ್ ಇಂಡಿಯಾ ಮಾತ್ರವಲ್ಲದೇ , ಕನ್ನಡ ಚಿತ್ರರಂಗದಿಂದ ಪ್ಯಾನ್ ವರ್ಲ್ಡ್ ಚಿತ್ರವಾಗಿ ಹೊರಹೊಮ್ಮಲು ಸಜ್ಜಾಗಿದೆ.
  

ಈಗಾಗಲೇ ಅಪ್ಡೇಟ್ ನ ಕುರಿತಂತೆ ಹಲವಾರು ಚರ್ಚೆಗಳು ಪ್ರಾರಂಭವಾಗಿವೆ. 
ಅದರಲ್ಲಿ ಕಿಚ್ಚ ಸುದೀಪ್ ರವರಿಗೆ ನಾಯಕಿಯ ಅನೌನ್ಸ್ಮೆಂಟ್ ನಡೆಯಬಹುದು, ಅಥವಾ ಚಿತ್ರದ ಟೈಟಲ್ ನ್ನು ವಿಕ್ರಾಂತ್ ರೋಣ ಎಂದು ಬದಲಾಯಿಸಬಹುದು ಇಲ್ಲವಾದಲ್ಲಿ ಚಿತ್ರದ ಟೀಸರ್ ರಿಲೀಸ್ ಡೇಟನ್ನು ಚಿತ್ರತಂಡ ರಿವೀಲ್ ಮಾಡಬಹುದು ಎಂದು ನಾನಾ ವಿಧವಾಗಿ ಊಹಾಪೋಹಗಳು ಹಾಗೂ ಚರ್ಚೆಗಳು ಪ್ರಾರಂಭವಾಗಿದೆ.

ಅದೆಲ್ಲಾ ಮೀರಿ ಈಗ ಫ್ಯಾಂಟಮ್ ಕೇವಲ ಕರ್ನಾಟಕದಲ್ಲಷ್ಟೇ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಬೇಡಿಕೆಯ ಚಿತ್ರವಾಗಿ ತನ್ನನ್ನು ತಾನು ರೂಪಿಸಿಕೊಂಡಿದೆ.

ಇದೆಲ್ಲ ಜನಪ್ರಿಯತೆ ಹಿಂದಿನ ಮೂಲಶಕ್ತಿ ಕಿಚ್ಚ ಸುದೀಪ್ ಎಂಬ ಆರಡಿ ಕಟೌಟ್.
ಇವರ ನಟನೆಯನ್ನು ಫ್ಯಾಂಟಮ್ ಚಿತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಒಂದೊಳ್ಳೆ ಪ್ಯಾನ್ ಇಂಡಿಯಾ ಅಲ್ಲಲ್ಲ ಪ್ಯಾನ್ ವರ್ಲ್ಡ್ ಚಿತ್ರದ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು, ಸಿನಿರಸಿಕರ.

Tuesday 19 January 2021

32 ವರ್ಷಗಳ ಇತಿಹಾಸವನ್ನು ಪುಡಿ ಮಾಡಿದ ಟೀಮ್ ಇಂಡಿಯಾ..!!

 


ಆಸ್ಟ್ರೇಲಿಯಾ ವಿರುದ್ಧದ 4 ಧೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗಾಬಾದಲ್ಲಿ ಗೆಲ್ಲೋ ಮೂಲಕ 32 ವರ್ಷಗಳ ಇತಿಸಾಸವನ್ನು ನುಚ್ಚು ನೂರು ಮಾಡಿ ದಾಖಲೆ ಸೃಷ್ಟಿಸಿದೆ.


1988ರಿಂದ ಆಡಿದ ಯಾವುದೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಇಲ್ಲಿ ಸೋತಿಲ್ಲ , ಇದೇ ಮೊದಲ ಬಾರಿಗೆ ನಮ್ಮ ಭಾರತದ ಎದುರಿನ ಟೆಸ್ಟ್ ಸರಣಿನ್ನು 2-1 ರ ಮೂಲಕ ಸೋತು ಗಾಬಾದ ತನ್ನ ಇತಿಹಾಸವನ್ನು ಕೈ ಚೆಲ್ಲಿತು.


ಹಲವಾರು ಗಾಯದ ಸಮಸ್ಯೆ ಹಾಗೂ ಆಸ್ಟ್ರೇಲಿಯಾ ವೀಕ್ಷಕರ ಕೆಟ್ಟ ಮಾತುಗಳ ನಡುವೆ ಯಾವುದೇ ಹಿರಿಯ ಆಟಗಾರರು ತಂಡದಲ್ಲಿದ್ದದಿದ್ದರೂ ಯುವ ಭಾರತ ತಂಡ ತಮ್ಮ ದೇಶದ ಅಭಿಮಾನವನ್ನು ಮನದಲ್ಲಿಟ್ಟುಕೊಂಡು ಎಲ್ಲವನ್ನೂ ಮೀರಿ ಈ ಐತಿಹಾಸಿಕ ಜಯವನ್ನು ತಮ್ಮದಾಗಿಸಿಕೊಂಡಿದೆ. 





ಸಿರಾಜ್ ಬೌಲಿಂಗ್ ನಲ್ಲಿ ಮಿಂಚಿದರೆ, ಬ್ಯಾಟಿಂಗ್ ನಲ್ಲಿ ಶುಭಮಾನ್ ಗಿಲ್, ಚೇತೇಶ್ವರ್ ಪೂಜಾರ , ಹಾಗೂ ರಿಶಭ್ ಪಂತ್ ತಮ್ಮ ಕೈಚಳಕವನ್ನು ತೋರಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.





ಈ ಐತಿಹಾಸಿಕ ಗೆಲುವನ್ನು ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಎಲ್ಲಾ ಗಣ್ಯರು ಸಂಭ್ರಮದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯಗಳನ್ನು ತಿಳಿಸಿದರು


Monday 18 January 2021

ರಾಜಕುಮಾರ ಕೇವಲ ಸಿನಿಮಾ ಅಲ್ಲ...??!!



ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಯಾವ ಚಿತ್ರ ನಿಮಗೆ ಫೇವರಿಟ್ ಅಂತ ಕೇಳಿದರೆ 10 ರಲ್ಲಿ 9 ಜನ ಹೇಳೋ ಹೆಸರು 100% ರಾಜಕುಮಾರ.

ಯಾಕೆಂದರೆ ಅದರ ಪರಿಣಾಮ ಇಂದಿಗೂ ಜನರ ಮನಸ್ಸಲ್ಲಿ ಹಾಗೇ ಇದೆ.
ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿಯ ನಂತರ ಹೊಂಬಾಳೆ ಫಿಲ್ಮ್ಸ್ ನ ಮೂಲಕ ಪುನೀತ್ ರಾಜ್ ಕುಮಾರ್ ರವರ ಜೊತೆಯಾದ ಸಂತೋಷ್ ಆನಂದ್ ರಾಮ್ , ಪವರ್ ಸ್ಟಾರ್ ಗೆ ಪರ್ಫೆಕ್ಟ್ ಡೈರೆಕ್ಟರ್ ಅನ್ನೋದನ್ನ ತೋರಿಸಿಕೊಟ್ಟೋರು.

ರಾಜಕುಮಾರ ಚಿತ್ರ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಕಟಮರಾಯುಡು ಚಿತ್ರದ ಎದುರಾಗಿ ಬಿಡುಗಡೆಯಾದರೂ ಬಾಕ್ಸ್ ಆಫೀಸ್ ನಲ್ಲಿ ಗೆದ್ದು ನಗೆಬೀರಿದ್ದು ಮಾತ್ರವಲ್ಲದೇ ಇಂಡಸ್ಟ್ರಿ ಹಿಟ್ ಪಟ್ಟವನ್ನು ಸಹ ಗಳಿಸಿತ್ತು.
ಹಾಕಿದ್ದ ಬಂಡವಾಳ ಕ್ಕಿಂತ ಅದೆಷ್ಟೋ ಪಟ್ಟು ಅಧಿಕ ಲಾಭ ಗಳಿಸಿಕೊಟ್ಟಿತ್ತು ಹೊಂಬಾಳೆ ಫಿಲ್ಮ್ಸ್ ಗೆ.

ಈ ಸಿನಿಮಾ ನೋಡಲು ಫ್ಯಾಮಿಲಿ ಆಡಿಯನ್ಸ್ ಹಿಂದೆಂದೂ ಬಂದಿರದಷ್ಟು ಸಂಖ್ಯೆಯಲ್ಲಿ ಮತ್ತೆ ಮತ್ತೆ ಬಂದಿದ್ದರು. ಅಲ್ಲದೇ ಚಿತ್ರ ಅದೆಷ್ಟೋ ಕುಟುಂಬಗಳನ್ನು ಒಂದು ಮಾಡಿತು.
ಅದಕ್ಕೆ ಇಡೀ ಕನ್ನಡ ಚಿತ್ರರಂಗವೇ ಇದು ಕೇವಲ ಚಿತ್ರವಲ್ಲ, ಬದುಕಿನ ಕುರಿತಂತೆ ಬರೆದ ಭಾಷ್ಯ ಎಂಬುದಾಗಿ ಕರೆಯಿತು.

ಈಗ ಅದೇ ಕಾಂಬಿನೇಷನ್ ನಲ್ಲಿ ಯುವರತ್ನ ಚಿತ್ರ ಕೂಡ ಮೂಡಿಬರುತ್ತಿದೆ ಖಂಡಿತಾ ಈ ಚಿತ್ರ ಕೂಡ ಇಂಡಸ್ಟ್ರಿ ಹಿಟ್ ಆಗಲೀ ಎನ್ನೋದೆ ನಮ್ಮ ಆಶಯ.

ಫ್ಯಾಂಟಮ್ Update ಇದೇ ಜನವರಿ 21 ಕ್ಕೆ...??

 
ಅಂತೂ ಇಂತೂ ಅಭಿಮಾನಿಗಳು ಹಾಗೂ ಕೋಟ್ಯಾಂತರ ಕನ್ನಡ ಸಿನಿಪ್ರೇಮಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ.

ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರದ ಕುರಿತಂತೆ ಅಪ್ಡೇಟ್ ಇದೇ ಜನವರಿ 21 ಕ್ಕೆ ಬಿಡುಗಡೆಯಾಗಲಿದೆ.

ಈಗಾಗಲೇ ಅಭಿಮಾನಿಗಳಲ್ಲಿ ಆ ಸರ್ಪ್ರೈಸ್ ಏನಿರಬಹುದು ಎಂದು ಚರ್ಚೆಗಳು ಪ್ರಾರಂಭವಾಗಿವೆ.

ಈಗಾಗಲೇ ಕಿಚ್ಚ ಸುದೀಪ್ ರವರ 25 ವರ್ಷಗಳ ಸಿನಿಜರ್ನಿಯ ಪೂರೈಕೆಯ ಹಿನ್ನೆಲೆಯಲ್ಲಿ ಈ ಅಪ್ಡೇಟ್ ಬರ್ತಿರೋದು ಅಭಿಮಾನಿಗಳಲ್ಲಿ ಖುಷಿಯನ್ನು ದ್ವಿಗುಣಗೊಳಿಸಿದೆ.
ಈಗಾಗಲೇ ಹಲವೆಡೆ ಚಿತ್ರದ ಟೀಸರ್ ಬಿಡುಗಡೆಯಾಗಬಹುದೆಂದು ಚರ್ಚೆ ನಡೆಯುತ್ತಿದ್ದರೆ, ಕೆಲವೆಡೆ ಚಿತ್ರಕ್ಕೆ ಬಾಲಿವುಡ್ ನಾಯಕಿಯ ಆಗಮನವಾಗಲಿದೆ ಎಂಬ ಬಗ್ಗೆ ಮಾತು ಪ್ರಾರಂಭವಾಗಿದೆ.

ಒಟ್ಟಾರೆ ಈ ವರ್ಷದ ಅತೀ ಬಹುನಿರೀಕ್ಷಿತ ಚಿತ್ರದ ಅತೀ ದೊಡ್ಡ ಸುದ್ಧಿ ಹೊರಗೆ ಬರೋದನ್ನ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ.

Sunday 17 January 2021

ಕಿಚ್ಚನ ಕನ್ನಡದ ಕಂಪು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ..!!!

 

 


 

 

ಕಿಚ್ಚ ಸುದೀಪ್ ಎಂದರೆ ಕನ್ನಡದ ಅಸ್ಮಿತೆ. ಕನ್ನಡದ ಆಸ್ತಿ ಎಂದರೆ ತಪ್ಪಾಗಲಾರದು.

ಅವರು ಎಲ್ಲೇ ಹೋಗಲಿ ಕನ್ನಡ ಹಾಗೂ ಕನ್ನಡ ಸಂಸ್ಕೃತಿಯ ಬಾವುಟವನ್ನು ತಾವು ಹೋಗುವ ಸ್ಥಳಗಳಲ್ಲಿ ನೆಟ್ಟು ಕನ್ನಡಕ್ಕಾಗಿ ಪ್ರೀತಿ ಹಾಗೂ ಗೌರವಗಳನ್ನು ಸಂಪಾದಿಸಿಕೊಂಡು ಬರುತ್ತಾರೆ ಇದು ಅವರನ್ನು ಮೆಚ್ಚಲೇಬೇಕು ಎನ್ನುವಂತೆ ಮಾಡುತ್ತೆ.

51 ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಮುಖ್ಯ ಅತಿಥಿಯಾಗಿ ಹೋದ ಕಿಚ್ಚ ಸುದೀಪ್ ಭಾಷಣ ಮಾಡೋ ಸಂದರ್ಭದಲ್ಲಿ ಮೊದಲು ಕನ್ನಡದಲ್ಲಿ ಪ್ರಾರಂಭಿಸಿ ಕನ್ನಡತನವನ್ನು ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೂಡ ಪಸರಿಸಿ ಎಲ್ಲಾ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಉಪಸ್ಥಿತರಿದ್ದರು.




ಫ್ಯಾಂಟಮ್ ಚಿತ್ರ ಈಗಾಗಲೇ ಬಹುಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡ ಚಿತ್ರರಂಗದ ಹೆಗ್ಗುರುತಾಗಿ ರಾಷ್ಟ್ರಾದ್ಯಂತ ಸಂಚರಿಸಲು ಇನ್ನೇನು ಸಜ್ಜಾಗಿದೆ.

ಕಿಚ್ಚ ಸುದೀಪ್ ರವರ ಕನ್ನಡ ಪ್ರೇಮದಿಂದಾಗೀನೆ ಇಂದು ಅವರು ಎಲ್ಲೇ ಹೋಗಲಿ ಕನ್ನಡದ ಅರಿವನ್ನು ಹಾಗೂ ಕನ್ನಡ ಸಂಸ್ಕೃತಿಯನ್ನು ಪರಭಾಷಿಗರಿಗೆ ಪರಿಚಯಿಸಿ ಕನ್ನಡದ ಬಗೆಗಿನ ಪರಿಚಯವನ್ನು ದೇಶಾದ್ಯಂತ ವಿಸ್ತಾರವಾಗಿ ಹರಡಿದ್ದಾರೆ.




ನೀವು ಪರಭಾಷಿಗರಿಗೆ ಕನ್ನಡ ಅಥವಾ ಕರ್ನಾಟಕದ ಬಗ್ಗೆ ಕೇಳಿದಾಗ ಮೊದಲು ಅವರು ಹೇಳುವ ಹೆಸರು ಕಿಚ್ಚ ಎಂದೇ.
ಅದು ಕಿಚ್ಚ ಸುದೀಪ್ ರವರು ಸಂಪಾದಿಸಿರುವ ಪ್ರೀತಿ ಗೌರವ.
ತಾವು ಬೆಳೆಯೋದರ ಜೊತೆಗೆ ಕನ್ನಡದ ಕೀರ್ತಿಯನ್ನು ಸಹ ಕಿಚ್ಚ ಸುದೀಪ್ ಉಚ್ಚ ಶ್ರೇಣಿಗೆ ಕರೆದೊಯ್ಯುತ್ತಿದ್ದಾರೆ.

Saturday 16 January 2021

ಬೈಕ್ ಅಲ್ಲಿ ಸೈಡ್ ಮಿರರ್ ಇಲ್ಲಾಂದ್ರೆ , ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಿಲ್ಲ ಅಂದ್ರೆ ಬೀಳತ್ತೆ ದಂಡ

     ದೆಹಲಿ  : ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ದಂಡ ವಿಧಿಸುತ್ತಿದೆ. ಬೈಕ್​ನಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಮುಂದೆ ಕೂರುವವರು ಕಡ್ಡಾಯವಾಗಿ ಸೀಟ್​ಬೆಲ್ಟ್​ ಧರಿಸಬೇಕು ಹೀಗೆ ಹಲವು ನಿಯಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಿಗಿಗೊಳಿಸಲಾಗಿದೆ. ಜನರು ನಿಯಮ ಪಾಲಿಸಬೇಕು ಎನ್ನುವ ಕಾಳಜಿಗಿಂತ ದಂಡ ತೆರಬೇಕು ಎನ್ನುವ ಭಯದಲ್ಲೇ ಒಲ್ಲದ ಮನಸ್ಸಿನಿಂದಾದರೂ ಅವುಗಳಿಗೆ ಒಗ್ಗಿಕೊಂಡಿದ್ದಾರೆ.

                         ಇದೀಗ ವಾಹನ ಸವಾರರಿಗೆ ಸಂಬಂಧಿಸಿದಂತೆ ಮತ್ತೊಂದು ನಿಯಮ ಜಾರಿಯಾಗಿದೆ. ಈ ನೂತನ ನಿಯಮದ ಅನುಸಾರ ಬೈಕ್​ನಲ್ಲಿ ಸೈಡ್​ ಮಿರರ್​ ಇರದಿದ್ದರೆ ₹500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್​ ಬೆಲ್ಟ್​ ಧರಿಸದಿದ್ದರೆ ₹1000 ದಂಡ ವಿಧಿಸಬಹುದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದಲೇ ನಿಯಮ ಜಾರಿಯಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.

 

ಬೈಕ್​ನಲ್ಲಿ ಸೈಡ್​ ಮಿರರ್​, ಕಾರಿನಲ್ಲಿ ಹಿಂಬದಿ ಸವಾರರಿಗೆ ಸೀಟ್​ ಬೆಲ್ಟ್​ ಕಡ್ಡಾಯ



                            ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ದೆಹಲಿ ಸಂಚಾರ ಪೊಲೀಸರು, ಬಹುತೇಕ ಬೈಕ್​ಗಳಲ್ಲಿ ಸೈಡ್​ ಮಿರರ್​ ಇರುವುದೇ ಇಲ್ಲ. ಕೆಲವರು ಶೋಕಿಗಾಗಿ ತೆಗೆದಿಡುತ್ತಾರೆ. ಇದರಿಂದ ಅಪಘಾತ ಆಗುವ ಸಂಭವ ಹೆಚ್ಚಿದೆ. ಅಂತೆಯೇ, ಕಾರಿನಲ್ಲಿ ಹಿಂಬದಿ ಕುಳಿತು ಸಂಚರಿಸುವವರು ಸೀಟ್​ ಬೆಲ್ಟ್​ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದು ದೊಡ್ಡ ಮಟ್ಟದ ಅಪಘಾತಗಳಲ್ಲಿ ಪ್ರಾಣಕ್ಕೆ ಸಂಚಕಾರ ತಂದೊಡುತ್ತಿದೆ. ಆದ್ದರಿಂದ, ಈ ಕುರಿತು ವಾಹನ ಸವಾರರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

                            ಈ ನಿಯಮಗಳು ಹೊಸದಾಗಿ ರೂಪುಗೊಂಡಿರುವುದೇನಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲವಷ್ಟೇ. ಇನ್ನುಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

                            ನಿನ್ನೆಯಿಂದಲೇ ದೆಹಲಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಆರಂಭಿಕ ಹಂತದಲ್ಲಿ ಸೈಡ್​ ಮಿರರ್ ಅಳವಡಿಸಿದ ಬೈಕ್​ ಸವಾರರಿಗೆ ₹500 ಮತ್ತು ಕಾರಿನಲ್ಲಿ ಸೀಟ್​ ಬೆಲ್ಟ್​ ಧರಿಸದೇ ಕುಳಿತುಕೊಳ್ಳುವ ಹಿಂಬದಿ ಸವಾರರಿಗೆ ₹1000 ದಂಡ ವಿಧಿಸುವುದಾಗಿ ಪ್ರಕಟಣ ಹೊರಡಿಸಿದ್ದಾರೆ.



ಕಿಚ್ಚ ಕನ್ನಡ ಹೆಮ್ಮೆ ಅಂತ ಮತ್ತೆ ಸಾಬೀತಾಗಿದೆ..!!

 



                          ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ದೇಶದ ಯಾವುದೇ ಭಾಷೆಯಲ್ಲೂ ಕೂಡ ಅಲ್ಲಿನ ನಟರೂ ಕೂಡ ನಾಚುವಂತೆ ನಟಿಸೋ ನ್ಯಾಚುರಲ್ ಹಾಗೂ ವರ್ಸಟೈಲ್ ನಟ.

                            ಕನ್ನಡ ಚಿತ್ರರಂಗದ ಬಾವುಟವನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ಕೂಡ ಗೌರವಯುತ ಸ್ಥಾನದಲ್ಲಿ ನೆಟ್ಟಂತಹ ನಟ . ಇವರ ನಟನೆಯನ್ನು ಲೆಜೆಂಡ್ ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಹಾಗೂ ಕಮಲ್ ಹಾಸನ್ ರವರೇ ಮೆಚ್ಚಿದ್ದರು.

                            ಆಂದ್ರಪ್ರದೇಶದ ನಟನೆಗೆ ಸನ್ಮಾನಿಸುವ ಉಚ್ಛ ಪ್ರಶಸ್ತಿಯಾದ ನಂದಿ ಅವಾರ್ಡ್ ನ್ನು ನೀಡಿ ಸನ್ಮಾನಿಸಿದ್ದರು. ಟೊರೆಂಟೋ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ , ಹೀಗೆ ಲೆಕ್ಕ ಹಾಕ್ತಾ ಹೋದ್ರೆ ಅವಾರ್ಡ್ ಗಳ ಲಿಸ್ಟ್ ಮುಂದೆ ಹೋಗ್ತಾನೇ ಇರುತ್ತೆ.
ಕಿಚ್ಚ ಅವಾರ್ಡ್ ಗಳಿಂದ ದೂರ ಹೋದರೂ , ಅವಾರ್ಡ್ ಗಳು ಕಿಚ್ಚ ಸುದೀಪ್ ರವರನ್ನು ಹುಡುಕಿಕೊಂಡು ಬರುತ್ತಿದ್ದವು.

                            ಈಗ ಕಿಚ್ಚ ಸುದೀಪ್ ರವರು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡೋವಂತಹ ಇನ್ನೊಂದು ಕೆಲಸ ಮಾಡಿದ್ದಾರೆ.


                                ಇಂದಿನಿಂದ ಗೋವಾದಲ್ಲಿ ನಡೆಯಲಿರುವ 51 ನೇ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಆಮಂತ್ರಿತಗೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಗೌರವವನ್ನು ಸ್ವೀಕರಿಸಿದ ಮೊದಲ ಕನ್ನಡ ನಟನಾಗಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.




                                ಅದಕ್ಕೆ ಅನ್ಸತ್ತೆ ಹೇಳೋದು ಕಿಚ್ಚ ಸುದೀಪ್ ರವರು ಯಾವುದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲಿ ಅಲ್ಲಿಂದ ಪ್ರೀತಿ ಹಾಗೂ ಅಲ್ಲಿ ಕನ್ನಡದ ಕುರಿತಂತೆ ಗೌರವವನ್ನು ಬಿತ್ತಿ ಬರುತ್ತಾರೆ .

 

Instagram 

Friday 15 January 2021

ಹೆಬ್ಬುಲಿ ಕ್ರೇಜ್ Never Before Never Again 😍😍😍


 

 

                 ಹೆಬ್ಬುಲಿ, ಈ ಫಿಲ್ಮ್ ಹೆಸರು ಕೇಳಿದ್ರೇನೆ ಒಂದ್ಸಲ ಮೈ ಜುಮ್ ಅಂದೇ ಅನ್ಸುತ್ತೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆರ್ಮಿ ಆಫಿಸರ್ ಆಗಿ ನಟಿಸಿದ್ದ ಈ ಚಿತ್ರ ಅಭಿಮಾನಿಗಳಲ್ಲಿ ಇಂದಿಗೂ ವಿಶೇಷ ಸ್ಥಾನದಲ್ಲಿ ಇದೆ.

                            ಹೆಬ್ಬುಲಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿದಷ್ಟು ಹವಾ ಯಾವ ಸಿನಿಮಾವೂ ಎಬ್ಬಿಸಿಲ್ಲ.
                            ಮೊದಲಿಗೆ ಕಿಚ್ಚ ಸುದೀಪ್ ರವರ ಹೇರ್ ಸ್ಟೈಲ್ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದ್ದಂತೆ ಹರೀ ಫ್ಯಾನ್ಸ್ ಅಲ್ಲಾ ಎಲ್ಲರೂ ಈ ಹೇರ್ ಸ್ಟೈಲ್ ನ್ನು ಮಾಡಿಸಿಕೊಂಡರು.
ಸುದೀಪ್ ರವರ ಈ ಸ್ಟೈಲ್ ಕೇವಲ ಇಲ್ಲಿ ಮಾತ್ರವಲ್ಲ ಜಪಾನ್ ಚೀನಾದಲ್ಲಿ ಕೂಡ ಅಭಿಮಾನಿಗಳಿಂದ ಮೆಚ್ಚಲ್ಪಟ್ಟಿತ್ತು.

 


 

 

 

                                ಇನ್ನು ಹೆಬ್ಬುಲಿ ಚಿತ್ರ IMDB ಯಲ್ಲಿ ಟ್ರೆಂಡ್ ಗೆ ಬಂದ ಮೊದಲ ಚಿತ್ರವಾಗಿ ಮೂಡಿಬಂದಿತು ಮಾತ್ರವಲ್ಲದೇ 40 ಕ್ಕೂ ಅಧಿಕ ದಿನಗಳಿಗೆ ನಾನ್ ಸ್ಟಾಪ್ ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗಿ ದಾಖಲೆ ಸೃಷ್ಟಿಸಿತು. ಮಾತ್ರವಲ್ಲದೇ ಆಗ ಫೇಸ್ಬುಕ್ ಟ್ರೆಂಡ್ ನಲ್ಲಿ ಬಂದ ಏಕೈಕ ಕನ್ನಡ ಚಿತ್ರವಾಗಿ ಮೂಡಿಬಂತು.

                                ಇನ್ನೂ ಕಲೆಕ್ಷನ್ ವಿಚಾರದಲ್ಲೂ ಕಿಚ್ಚನ ಹೆಬ್ಬುಲಿ ಬಾಕ್ಸ್ ಆಫೀಸ್ ನ ಎದೆ ಬಗೆದಿತ್ತು.  ಅಂದಿನ ಕಾಲಕ್ಕೆ ಒಂದು ದಿನದಲ್ಲೇ 10 ಲಕ್ಷ ಟಿಕೆಟ್ ನ್ನು ಸೇಲ್ ಮಾಡಿ ಮೊದಲ ದಿನದಲ್ಲಿ 10ಕೋಟಿ ಓಪನಿಂಗ್ ಪಡೆದ ಮೊದಲ ಕನ್ನಡ ಚಿತ್ರವಾಗಿ ಘರ್ಜಿಸಿತ್ತು.

 


                            ಈ ಚಿತ್ರದ ಮೇಲೆ ಇಷ್ಟೊಂದು ಕ್ರೇಜ್ ಬರಲು ಮುಖ್ಯ ಕಾರಣ ಬೇರ್ಯಾರು ಅಲ್ಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ .  ಅವರು ಯಾವುದೇ ಹೊಸ ಸ್ಟೈಲ್ ಟ್ರೈ ಮಾಡಲಿ ಅವರನ್ನು ಫಾಲೋ ಮಾಡೋ ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಅದು ವೈರಲ್ ಆಗಿದೆ.

                             ಹೆಬ್ಬುಲಿ ಚಿತ್ರಕ್ಕಿದ್ದ ಕ್ರೇಜ್ ಹೆಂಗಿತ್ತೆಂದರೆ ಹಿಂದೆ ಯಾವ ಚಿತ್ರಕ್ಕೆ ಇದ್ದಿರಲಿಲ್ಲ , ಇನ್ನು ಮುಂದೆ ಯಾವ ಚಿತ್ರಕ್ಕೆ ಬರೋದು ಕೂಡ ಡೌಟ್.

 

 

 

ಸಲಾರ್ ಇಂದಿನಿಂದ ರೆಡಿ ಘರ್ಜಿಸೋಕೆ..!!...

 

 


 

 

 

ಅನೌನ್ಸ್ ಆದಾಗಿನಿಂದ ಇಂದಿನವರೆಗೂ ಟ್ರೆಂಡಿಂಗ್ ನಲ್ಲಿದ್ದ ಸಲಾರ್ ಚಿತ್ರದ ಮುಹೂರ್ತ ಪೂಜೆ ಇಂದು ಹೈದರಾಬಾದ್ ನಲ್ಲಿ ನೆರವೇರಿದೆ.

ಈಗಾಗಲೇ ಚಿತ್ರತಂಡದಲ್ಲಿ ಯಾರ್ಯಾರು ಇದ್ದಾರೆಂಬುದು ತಿಳಿದು ಬಂದಿಲ್ಲ. ಆದರೆ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರವನ್ನು ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.
ಅಲ್ಲದೇ ಮಾಸ್ ಬಿಜಿಎಮ್ ಕಿಂಗ್ ಎಂದೇ ಕರೆಸಿಕೊಳ್ಳುವ ರವಿ ಬಸ್ರೂರು ಚಿತ್ರದ ಸಂಗೀತ ನಿರ್ದೇಶಕರಾಗಿ ಹಾಗೂ ಭುವನ್ ಗೌಡ ಸಿನೆಮಾಟೋಗ್ರಾಫರ್ ಆಗಿ ಚಿತ್ರತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.




ಇಂದು ಚಿತ್ರದ ಮುಹೂರ್ತ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ್, ಕನ್ನಡದ ಈಗಿನ ಟಾಪ್ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್, ಹಾಗೂ ಇಡೀ ಜಗತ್ತಿಗೆ ಭಾರತೀಯ ಚಿತ್ರರಂಗದ ಗತ್ತನ್ನು ತೋರಿಸಿದ್ದ ನಿರ್ದೇಶಕ ರಾಜಮೌಳಿ ಕೂಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈಗಾಗಲೇ ನೀಲ್ ಹೇಳಿರುವಂತೆ, ನನಗೆ ಪ್ರಭಾಸ್ ರವರ ಇನೋಸೆನ್ಸ್ ಅಂದರೆ ತುಂಬಾ ಇಷ್ಟ.
ಅವರನ್ನು ಸಲಾರ್ ಚಿತ್ರದಲ್ಲಿ ಹಿಂದೆಂದೂ ಕಂಡಿರದಂತಹ ಹೊಸ ಅವತಾರದಲ್ಲಿ ತೋರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಚಿತ್ರ ಇಡೀ ದೇಶಾದ್ಯಂತ ಸುದ್ಧಿಯಲ್ಲಿದ್ದು, ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಹಾಗೂ ಚಿತ್ರರಸಿಕರು ಕಾಯುತ್ತಿದ್ದಾರೆ.

 

Instagram 

Thursday 14 January 2021

ಸಂಕ್ರಾಂತಿ ಹಬ್ಬದಂದು ಹರುಷತಂದ ಕಿಚ್ಚ ಸು "ದೀಪ "....!!

 

 

 


 

                        ಕಿಚ್ಚ ಸುದೀಪ್ ಅಂದಾಗಲೇ ಅದೊಂದು ಪ್ರೀತಿನ ಹಂಚೋ ವ್ಯಕ್ತಿತ್ವ ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತು.

                        ಕಷ್ಟದಲ್ಲಿ ಯಾರೇ ಇರಲಿ ಮೊದಲು ಹೋಗಿ ಅವರ ಕಷ್ಟಕ್ಕೆ ಅವರ ಆತ್ಮೀಯನಂತೆ ಸ್ಪಂದಿಸುವ ಚಿನ್ನದಂತಹ ವ್ಯಕ್ತಿತ್ವದಿಂದಲೇ ತಾನೇ ಇಡೀ ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಅಚ್ಚು ಮೆಚ್ಚಾಗಿರೋದು.

                        ಈಗ ತಮ್ಮ ಚಾರಿಟೇಬಲ್ ಟೃಸ್ಟ್ ನ ಮೂಲಕ ನೊಂದವರ ಹಾಗೂ ನೆರವಿನ ಅಗತ್ಯವಿರುವವರಿಗೆ ಅವರ ಸಮಸ್ಯೆಗಳನ್ನು ಪರಿಹರಿಸೋದರ ಮೂಲಕ ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.

                        ಮಾಣಿಕ್ಯ ಚಿತ್ರದಲ್ಲಿ ಅವರ ಒಂದು ಡೈಲಾಗ್ " ಪ್ರೀತಿನಾ ಹಂಚಿಕೋ " ಅಂತ ಅದನ್ನು ನಿಜಜೀವನದಲ್ಲಿ ಕೂಡ ಪರಿಪಾಲಿಸೋ ನಟ ಕಿಚ್ಚ ಸುದೀಪ್.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮ್ಮ ಆಪ್ತರಾದ ಕಿರಣ್ ರವರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಉಡುಗೊರೆಯಾಗಿ ನೀಡೋದರ ಮೂಲಕ ಅವರ ಹಬ್ಬದ ದಿನವನ್ನು ಮತ್ತಷ್ಟು ಸಂತೋಷಗೊಳಿಸುವಲ್ಲಿ ಕಾರಣರಾದರು.

                    ಇದೇ ತರಹ ಅದೆಷ್ಟೋ ಜನರ ಜೀವನದಲ್ಲಿ ಬೆಳಕಾಗಿ ಅವರ ಮುಖದ ನಗುವಾಗಿ ಇರೋದಕ್ಕೆ ತಾನೇ   ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು " ಅಭಿಮಾನಿಗಳ ಅಭಿಮಾನಿ " ಅಂತ ಕರೆಯೋದು.

ತಮ್ಮ ಆದಾಯ 40ಕ್ಕೂ ಅಧಿಕ ಭಾಗವನ್ನು ಸಾಮಾಜಿಕ ಸೇವೆಗಳಿಗಾಗಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕನ್ನಡ ಚಿತ್ರರಂಗ ಇಂತಹ ಮನೋಜ್ಞ ನಟನನ್ನು ಹೊಂದಿರುವುದಕ್ಕೆ ಧನ್ಯವಾದರೆ, ಕನ್ನಡ ನಾಡು ಇಂತಹ ಕೊಡುಗೈ ದಾನಿಯನ್ನು ಪಡೆಯಲು ಧನ್ಯವಾಗಿದೆ .

ಇವರ ಈ ವ್ಯಕ್ತಿತ್ವ ಉಳಿದ ನಟರಿಗೂ ಮಾದರಿಯಾಗಲೀ ಎನ್ನುವುದು ನಮ್ಮ ಆಶಯ.

ಬಾರ್ ಲೆಸೆನ್ಸ್ ಪಡೆಯುವುದು ಹೇಗೆ? ಏನೆಲ್ಲಾ ಬೇಕು ನೋಡಿ



 

 

                    ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿದೆ. ಬಾರ್ ಪ್ರಾರಂಭಿಸುವುದು ಒಂದು ಪ್ರಮುಖ ಬಿಸಿನೆಸ್ ಎಂದು ಹೇಳಬಹುದು. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಬೇಕು. ಲೈಸೆನ್ಸ್ ಹೇಗೆ ಪಡೆಯುವುದು, ಅದಕ್ಕೆ ಏನೇನು ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

                    ಬಾರ್ ಗಳಲ್ಲಿ ಹಲವು ವಿಧಗಳಿವೆ. ಸಿಎಲ್ 1, ಸಿಎಲ್ 2, 4,5,6a,7,9,11. ಸಿಎಲ್ 1 ಎಂದರೆ ಹೋಲ್ ಸೇಲ್ ಬಾರ್, ಸಿಎಲ್ 2 ಎಂದರೆ ರಿಟೇಲರ್ ಬಾರ್. ಸಿಎಲ್ 4 ಎಂದರೆ ಕ್ಲಬ್ ಬಾರ್. ಸಿಎಲ್ 6a ಎಂದರೆ ಸ್ಟಾರ್ ಹೋಟೆಲ್ ಬಾರ್. ಸಿಎಲ್ 7 ಎಂದರೆ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್. ಸಿಎಲ್ 9 ಎಂದರೆ ಬಾರ್ ಎಂಡ್ ರೆಸ್ಟೋರೆಂಟ್. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಲು ಫೀಸ್ ಕೊಡಬೇಕಾಗುತ್ತದೆ. ಇದರಲ್ಲಿ ಐದು ರೀತಿ ಇರುತ್ತದೆ. 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, ಅದರ್ ಕಾರ್ಪೊರೇಷನ್, ಸಿಎಮ್ಇ, ಟಿಎಂಸಿ, ಕೊನೆಯದಾಗಿ ಅದರ್ಸ್. ಸಿಎಲ್ 1 ಬಾರ್ ಪ್ರಾರಂಭಿಸಬೇಕು ಎಂದರೆ 5,75,000- 7,25,000 ರೂಪಾಯಿಯವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 1 ಪ್ರಾರಂಭಿಸಲು 2006ರವರೆಗೆ ಲೈಸೆನ್ಸ್ ಕೊಟ್ಟಿದ್ದಾರೆ . ಸಿಎಲ್ 2 ಬಾರ್ ಎಂದರೆ ರೀಟೇಲ್ ಶಾಪ್ ಇದನ್ನು ಪ್ರಾರಂಭಿಸಲು 4 ಲಕ್ಷದಿಂದ 5 ಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್4 ಕ್ಲಬ್ ಬಾರ್ ಈ ಬಾರ್ ಪ್ರಾರಂಭಿಸಲು 2016-18ರವರೆಗೆ 5 ಲಕ್ಷದಿಂದ 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗಿತ್ತು. ಸಿಎಲ್ 5 ಎಂದರೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೇಂದಿ ಲೈಸೆನ್ಸ್ ಆಗಿದೆ. ಈ ಲೈಸೆನ್ಸ್ ಪಡೆಯಲು 50 ಸಾವಿರದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 6a ಸ್ಟಾರ್ ಹೊಟೆಲ್ ಲೈಸೆನ್ಸ್ ಪಡೆಯಲು 10 ಲಕ್ಷದಿಂದ ಪ್ರಾರಂಭವಾಗುತ್ತದೆ. ಸಿಎಲ್ 7 ಈ ಲೈಸೆನ್ಸ್ ಪಡೆಯಲು 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 9 ಬಾರ್ ಎಂಡ್ ರೆಸ್ಟೋರೆಂಟ್ ಪ್ರಾರಂಭಿಸಬೇಕಾದರೆ ಲೈಸೆನ್ಸ್ ಪಡೆಯಲು ಪ್ರದೇಶದ ಜನಸಂಖ್ಯೆಯ ಮೇಲೆ ಫೀಸ್ ಇರುತ್ತದೆ. ಕಡಿಮೆಯೆಂದರೂ 7 ಲಕ್ಷ ಇರುತ್ತದೆ. ಕೆಲವು ಲೈಸೆನ್ಸ್ ನ ಫೀಸ್ ಆಯಾ ಪ್ರದೇಶದ ಜನಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ.



                  

                      ಬಾರ್ ಲೈಸೆನ್ಸ್ ಪಡೆಯಲು ಮೊದಲು ರಾಜ್ಯ ಅಬಕಾರಿ ಇಲಾಖೆ ಅಥವಾ ಜಿಲ್ಲಾ ಅಬಕಾರಿ ಇಲಾಖೆಯ ಭೇಟಿ ನೀಡಿ ಮಾಹಿತಿ ಕೊಡಬೇಕಾಗುತ್ತದೆ. ಯಾವ ಜಾಗದಲ್ಲಿ ಬಾರ್ ಪ್ರಾರಂಭಿಸುತ್ತೇವೆ ಆ ಜಾಗದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಅವರು ಒಪ್ಪಿಕೊಂಡ ನಂತರ ಸ್ವಲ್ಪ ಫೀಸ್ ಕಟ್ಟಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಹಾಕುವಾಗ ಡಿಪಾರ್ಟ್ಮೆಂಟ್ ಸಲಹೆ ಪಡೆದು ಅರ್ಜಿ ಸಲ್ಲಿಸಬೇಕು. ನಂತರ ಪರಿಶೀಲನೆ ಮಾಡುತ್ತಾರೆ, ಪೊಲೀಸ್ ಇಲಾಖೆ ಮೂಲಕ ಸ್ಥಳ ತಪಾಸಣೆ ಮಾಡುತ್ತಾರೆ. ಶುಲ್ಕ ಎಷ್ಟು ತುಂಬಬೇಕು ಎಂಬುದನ್ನು ಹೇಳುತ್ತಾರೆ ಅದರಂತೆ ಶುಲ್ಕ ಪಾವತಿಸಬೇಕು. ಬಾರ್ ಪ್ರಾರಂಭಿಸಲು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಆಧಾರ್ ಕಾರ್ಡ್, ಐಡಿ ಕಾರ್ಡ್, ಅಡ್ರೆಸ್ ಪ್ರೂಫ್ ಗಳನ್ನು ಸಲ್ಲಿಸಬೇಕು. ಬಾಡಿಗೆಗೆ ಶಾಪ್ ತೆಗೆದುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲಾತಿ ಬೇಕಾಗುತ್ತದೆ. ಬಾರ್ ಪ್ರಾರಂಭಿಸುವವರಿಗೆ ಕೆಲವು ಅರ್ಹತೆಗಳಿರಬೇಕು ಅದೇನೆಂದರೆ 21 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಭಾರತೀಯ ಪ್ರಜೆಯಾಗಿರಬೇಕು. ಸರಿಯಾದ ದಾಖಲಾತಿಗಳನ್ನು ಸಲ್ಲಿಸಿದಲ್ಲಿ 10ರಿಂದ 15 ದಿನಗಳೊಳಗೆ ಲೈಸೆನ್ಸ್ ಸಿಗುತ್ತದೆ. 2018 ರ ನಂತರ ಬಾರ್ ಲೈಸೆನ್ಸ್ ಕೊಡುತ್ತಿಲ್ಲ ನಂತರದ ದಿನಗಳಲ್ಲಿ ಕೊಡಬಹುದು. ಒಂದು ಬಾರ್ ಪ್ರಾರಂಭಿಸಲು ಲೈಸೆನ್ಸ್ ಜೊತೆಗೆ ಶಾಪ್ ಎಸ್ಟಾಬ್ಲಿಷ್ಮೆಂಟ್ ಲೈಸೆನ್ಸ್, ಪೋಲಿಸ್ ಹೌಸ್ ಲೈಸೆನ್ಸ್, ಎಪ್ಎಸ್ಎಸ್ಎಐ ಲೈಸನ್ಸ್, ಜಿಎಸ್ಟಿ ಲೈಸೆನ್ಸ್, ಮುನ್ಸಿಪಾಲಿಟಿ ಲೈಸೆನ್ಸ್ ಇರಬೇಕಾಗುತ್ತದೆ. ಈ ಎಲ್ಲಾ ಲೈಸೆನ್ಸ್ ಪಡೆಯಲು 6 ಲಕ್ಷ ರೂಪಾಯಿ ಖರ್ಚಾಗುತ್ತದೆ. ಬಾರ್ ಇಂಟೀರಿಯರ್, ಡಿಸೈನ್, ಕಾರ್ಮಿಕರು ಹೀಗೆ ಒಂದು ಬಾರ್ ಪ್ರಾರಂಭಿಸಲು 50ರಿಂದ 70 ಲಕ್ಷ ಖರ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.


ಕೆಜಿಎಫ್ ಚಾಪ್ಟರ್ 2 ಟೀಸರ್ ನ್ನು ಹಿಂದಿಕ್ಕಿದ ಕನ್ನಡ ಟ್ರೇಲರ್ ಯಾವುದು ಗೊತ್ತಾ..??!!


 

 

                             ಯಪ್ಪಾ !! ಚಿತ್ರ ಜಗತ್ತಿನ ನಿರೀಕ್ಷೆಗೂ ಮೀರಿ ಯೂಟ್ಯೂಬ್ ಗೆ ಬಡಿದಪ್ಪಳಿಸಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ  ಕೆಜಿಎಫ್ ಚಾಪ್ಟರ್ 2  ನ ಟೀಸರ್ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಇತ್ತು.

                            ಈಗ ಕೆಜಿಎಫ್ ಚಾಪ್ಟರ್ 2 ಟೀಸರ್ ನ್ನು ನಂಬರ್ 1 ಟ್ರೆಂಡಿಂಗ್ ಸ್ಥಾನದಿಂದ ಕೆಳಗಿಳಿಸಿ ಕನ್ನಡದ ಮತ್ತೊಂದು ಚಿತ್ರ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ ಸ್ಥಾನದಲ್ಲಿ ಮಿಂಚುತ್ತಿದೆ.

                            


                             ಹೌದು ರಿಶಭ್ ಶೆಟ್ಟಿ ನಟನೆಯ ವಿಭಿನ್ನ ಸ್ಟೈಲ್ ನಲ್ಲಿ ಮೂಡಿಬಂದಿರೋ ಹೀರೋ ಚಿತ್ರದ ಟ್ರೇಲರ್. ಈಗಾಗಲೇ ಕನ್ನಡ    ಪ್ರೇಕ್ಷಕರಿಗೆ ಟ್ರೇಲರ್ ಅತೀವವಾಗಿ ಇಷ್ಟವಾಗಿದ್ದು.
ಚಿತ್ರದ ಸ್ವಾಭಾವಿಕತೆ ವೀಕ್ಷಕರ ಮನವನ್ನು ಗೆದ್ದಿದೆ.

                            ಅಲ್ಲದೇ ಈ ಟ್ರೆಂಡಿಂಗ್ ಲಿಸ್ಟ್ ನಲ್ಲಿ  ಇನ್ನೊಂದು ಕನ್ನಡ ಚಿತ್ರವಾದ ಕಬ್ಜಾದ ಮೋಷನ್ ಪೋಸ್ಟರ್ ಕೂಡ 4 ನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ.  5 ನೇ ಸ್ಥಾನದಲ್ಲಿ ಕನ್ನಡ ಚಿತ್ರದ ಹೆಮ್ಮೆ ಕೆಜಿಎಫ್ ಚಾಪ್ಟರ್ 2 ನ ಟೀಸರ್  ಟ್ರೆಂಡಿಂಗ್ ನಲ್ಲಿದ್ದು,150 ಮಿಲಿಯನ್ ವೀಕ್ಷಣೆಯತ್ತ ದೌಡಾಯಿಸುತ್ತಿದೆ.

                            ಮತ್ತೊಮ್ಮೆ ಹೀರೋ ಚಿತ್ರದ ಟ್ರೇಲರ್ ಮೂಲಕ ರಿಶಭ್ ಶೆಟ್ಟಿ ಕಿಂಗ್ ಆಫ್ ಕಂಟೆಂಟ್ ಅಂತ ಸಾಬೀತು ಮಾಡಿದ್ದಾರೆ.

ಕಬ್ಜಾ ಮಾಡಲು ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್...!!

 

 

 


 

                ಕಿಚ್ಚ ಅಂದ್ರೇನೆ ಒಂತರಾ ಶಕ್ತಿ . ಈಗ ಈ ಶಕ್ತಿ ಏಳು ಭಾಷೆಯಲ್ಲಿ ಬಿಡುಗಡೆ ಆಗ್ತಿರೋ ಒಂದು ಚಿತ್ರಕ್ಕೆ ಶಕ್ತಿ ತುಂಬೋಕೆ ಹೊರಟಿದೆ.
ಹೌದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಬರ್ತಿರೋ ಪ್ಯಾನ್ ಇಂಡಿಯಾ ಚಿತ್ರಕ್ಕೆ ಈಗ ಪ್ಯಾನ್ ಇಂಡಿಯನ್ ಕನ್ನಡ ಸ್ಟಾರ್ ಕಿಚ್ಚ ಸುದೀಪ್ ರವರ ಎಂಟ್ರಿಯಾಗಿದೆ.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರತಂಡ ಸುದೀಪ್ ರವರನ್ನು ಭಾರ್ಗವ್ ಭಕ್ಷಿಯಾಗಿ ಕಬ್ಜಾ ಜಗತ್ತಿನಲ್ಲಿ ಪರಿಚಯಿಸುತ್ತಿದೆ.



 

                            ಅವರ ಪಾತ್ರವನ್ನು ಮಾಫಿಯಾ ವನ್ನು ಮುಗಿಸೋ ಜರ್ನಿಗೆ ಭಾರ್ಗವ್ ಭಕ್ಷಿ ಕಾಲಿಡುತ್ತಿದ್ದಾರೆ ಎಂಬ ಸೂಚನೆಯೊಂದಿಗೆ ತೋರಿಸಿದ್ದಾರೆ .


   



                            ಕಬ್ಜಾ ಚಿತ್ರತಂಡವಂತೂ ಕಿಚ್ಚ ಸುದೀಪ್ ಆಗಮನದಿಂದ ನೂರಾನೆ ಬಲ ಬಂದಷ್ಟು ಸಂತೋಷಗೊಂಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಯಾಕೆಂದರೆ ಕನ್ನಡದಲ್ಲಿ ಮೊದಲ ನಟ ದೇಶಾದ್ಯಂತ ಇಷ್ಟೊಂದು ಅಭಿಮಾನಿಗಳನ್ನು ಹಾಗೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ನೇಹಿತರನ್ನು ಸಂಪಾದಿಸಿರೋದು ಸುದೀಪ್ ಒಬ್ಬರೇ.
ಹಾಗಾಗಿ ಸುದೀಪ್ ರವರ ಎಂಟ್ರಿ ಖಂಡಿತ ಕಬ್ಜಾ ಚಿತ್ರತಂಡಕ್ಕೆ ಬಲ ತುಂಬಿದೆ .
ಅಲ್ಲದೇ ಮುಕುಂದ ಮುರಾರಿಯ ನಂತರ ಉಪ್ಪಿ ಹಾಗೂ ಕಿಚ್ಚ ಜೋಡಿ ಮತ್ತೆ ಒಂದಾಗುತ್ತಿರುವುದು ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿದೆ.

 

 ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ...

Wednesday 13 January 2021

ಅಭಿಮಾನಿಗಳ ವರ್ತನೆಯಿಂದ ಸಿಟ್ಟಾದ ಡಿಬಾಸ್ ಮಾಡಿದ್ದಾದ್ರೂ ಏನು ಗೊತ್ತಾ..??!!

 


 

                ಡಿ ಬಾಸ್ ಅಂದಾಕ್ಷಣ ನಮಗೆ ನೆನಪಿಗೆ ಬರೋದು ಅವರ ಮಾಸ್ ಅವತಾರ.
ಅವರು ಲಾಂಗ್ ಕೈಯಲ್ಲಿ ಎತ್ತಿದ್ರು ಅಂದ್ರೆ ಅದೊಂಥರ ಕಿಕ್ ಕೊಡೋ ಸನ್ನಿವೇಶ.
ಕನ್ನಡದ ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳಿಗೆ ಒಬ್ಬನೇ ಅರಸ ಈ ನಮ್ಮ ದಾಸ. ಅಭಿಮಾನಿಗಳನ್ನು ತನ್ನ ಸೆಲಬ್ರೆಟಿಗಳು ಅನ್ನೋ ಬಂಗಾರದ ಮನಸ್ಸಿನ ನಟ.
ಚಂದನವನದ ಮಾಸ್ ಮಹಾರಾಜ ಅಂದ್ರು ತಪ್ಪಾಗಲ್ಲ ಡಿಬಾಸ್ ನ.

ಚಾಲೆಂಜಿಂಗ್ ಸ್ಟಾರ್ ಕೇವಲ ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ತಮ್ಮ ಹೀರೋಗಿರಿಯನ್ನು ತೋರಿಸಿದವರು.

ಅದೇಷ್ಟೋ ನೊಂದವರ ಪಾಲಿಗೆ ಡಿಬಾಸ್ ದಾಸನಾಗಿ ಬಂದು ಸಹಾಯ ಒದಗಿಸಿ ಅದನ್ನು ಎಲ್ಲಿಯೂ ಬಿಟ್ಟುಕೊಡದಂತೆ ಮರೆಯಾಗಿದ್ದು ಇದೆ.
ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯದಂತಹ ಸ್ವಭಾವ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ನದ್ದು.

ಸ್ಯಾಂಡಲ್ ವುಡ್ ನ ನಟರಲ್ಲಿ ಯಾರಾದರೂ ಅರಣ್ಯ ಸಂಪತ್ತಿನ ಬಗ್ಗೆ ಅಥವಾ ಪ್ರಾಣಿಗಳ ಬಗ್ಗೆ ಮನುಷ್ಯರನ್ನು ಮೀರಿದ ಕಾಳಜಿ ವಹಿಸುತ್ತಾರೆಂದರೆ ಅದು ಕೇವಲ ಡಿಬಾಸ್.

ಒಂದು ಪ್ರಾಣಿಯ ಫೋಟೋ ಹಿಡಿಯಲು ಡಿಬಾಸ್ ಬೆಳಗಿನ ಜಾವ ಹೋಗಿ ಅದೆಷ್ಟೋ ಗಂಟೆ ಕಾದಿದ್ದೂ ಇದೆ.
ತಮ್ಮ ಫಾರ್ಮ್ ಹೌಸ್ ನಲ್ಲಿ ಅದೆಷ್ಟೋ ತರಹದ ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ ನಮ್ಮ ದರ್ಶನ್.
ಅಲ್ಲದೇ ಇದೇ ವಿಚಾರದಲ್ಲಿ ಅವರು ಈ ಹಿಂದೆ ಆಫ್ರಿಕಾ ಖಂಡದ ದೇಶಗಳಲ್ಲಿ ಪ್ರವಾಸಕ್ಕೆ ಹೋಗಿದ್ದು ಇದೆ.
ಆದರೆ ಇತ್ತೀಚೆಗಷ್ಟೇ ನಾಗರಹೊಳೆ ಕಾಡಿಗೆ ತೆರಳಿದ್ದಾಗ ಡಿಬಾಸ್ ಕೋಪಕ್ಕೆ ಅವರ ಸೆಲಬ್ರೆಟಿಗಳು ಅಂದರೆ ಫ್ಯಾನ್ಸ್ ತುತ್ತಾದರು.

ಅರಣ್ಯ ವೀಕ್ಷಣೆಗೆ ಬಂದಿದ್ದ ಡಿಬಾಸ್ ರವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದ ಅಭಿಮಾನಿಗಳ ದಂಡು ಗಲಾಟೆ ಮಾಡುತ್ತಿದ್ದುದನ್ನು ನೋಡಿದ ಡಿಬಾಸ್ ತುಸು ಕೋಪದಲ್ಲೇ, ಇಲ್ಲಿ ನಾನು ಸ್ವಲ್ಪ ದಿನ ಇಲ್ಲೇ ಇರುತ್ತೇನೆ. ನೀವು ಗಲಾಟೆ ಮಾಡಿ ಇಲ್ಲಿನ ನಿಯಮಗಳಿಗಾಗಲೀ, ಅಥವಾ ಇಲ್ಲಿನ ಪರಿಸ್ಥಿತಿಯನ್ನಾಗಲಿ ಹಾಳುಮಾಡೋದು ಬೇಡ ಎಂದು ಹೇಳಿದರು. ಇದನ್ನೂ ಕೂಡ ಅವರು ನಯವಾಗೇ ಹೇಳಿದ್ದಾರೆ.
ಡಿಬಾಸ್ ಗೆ ಈ ಘಟನೆ ಸ್ವಲ್ಪ ನೋವು ತಂದಿದ್ದರೂ,  ಅವರು ಅಭಿಮಾನಿಗಳಿಗೆ ಸಿಹಿಯನ್ನು ತಂದೇ ತಂದಿರ್ತಾರೆ ಫೋಟೋ ನೀಡೋದರ ಮೂಲಕ .

ಆದರೆ ನಿಯಮದ ಪರಿಪಾಲಕನಾಗಿ ತಮ್ಮ ಸಮಯಪ್ರಜ್ಞೆ ಇಲ್ಲಿ ನಾವು ಮೆಚ್ಚಲೇಬೇಕು.
ಅದಕ್ಕೆ ತಾನೇ ಅವರು ಕರ್ನಾಟಕದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ನಟರಲ್ಲಿ ಒಬ್ಬರಾಗಿರೋದು.
ಈಗಾಗಲೇ ಡಿಬಾಸ್ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬದ ವಿಶೇಷವಾಗಿ ರಾಜ್ಯಾದ್ಯಂತ ಮಾತ್ರವಲ್ಲದೇ ತೆಲುಗಿನಲ್ಲಿಯೂ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಅವರ ಅಭಿಮಾನಿ ಬಳಗ ಈಗಾಗಲೇ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಕಾತರರಾಗಿದ್ದಾರೆ.

ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ