ad

Tuesday 26 January 2021

ಬುರ್ಜ್ ಖಲೀಫಾಗೆ ಹೊರಟ ಬಾದ್ ಶಾ..!!

ವಿಕ್ರಾಂತ್ ರೋಣ ದೇಶದಾದ್ಯಂತ ಸುದ್ಧಿಯಲ್ಲಿದ್ದಾನೆ.
ಖಡಕ್ ಪೋಲಿಸ್ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೂ ಈಗ ಅಭಿನಯ ಚಕ್ರವರ್ತಿ ಹಾಗೂ ಅನೂಪ್ ಭಂಡಾರಿ ಯವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರೋ ವಿಕ್ರಾಂತ್ ರೋಣ ಕೇವಲ ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಬಹುಬೇಡಿಕೆಯ ಚಿತ್ರವಾಗಿದೆ.

ಇದೇ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಟೈಟಲ್ ಹಾಗೂ ಸ್ನೀಕ್ ಪೀಕ್ ಬಿಡುಗಡೆ ಮಾಡಿದಂತಹ ಪ್ರಪಂಚದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ.

ಸ್ವತಃ ಕಿಚ್ಚ ಸುದೀಪ್ ರವರೇ ಹೇಳುವಂತೆ ನಿರ್ಮಾಪಕ ಹಾಗೂ ಅವರ ಸ್ನೇಹಿತರಾದ ಜಾಕ್ ಮಂಜುನಾಥ್ ರವರ ದೃಢ ನಿರ್ಧಾರ ಚಿತ್ರ ಈ ಮಟ್ಟಕ್ಕೆ  ಬರುವಲ್ಲಿ ಮುಖ್ಯ ಕಾರಣ ಎಂದಿದ್ದಾರೆ.

ಬುರ್ಜ್ ಖಲೀಫಾದಲ್ಲಿ ಕಾರ್ಯಕ್ರಮ ನಡೆಯಲು 5 ದಿನಗಳು ಬಾಕಿ ಇರುವಂತೆಯೇ ಕಿಚ್ಚ ಸುದೀಪ್ ರವರು ತಂಡದೊಂದಿಗೆ ದುಬೈಗೆ ಹೊರಟಿದ್ದಾರೆ.
 
 

ಜನವರಿ 31 ರಂದು ಕನ್ನಡದ ಹೆಮ್ಮೆ ಜಗತ್ತಿನಲ್ಲೇ ಅತ್ಯಂತ ಎತ್ತರದ ಕಟ್ಟಡದ ಮೇಲೆ ಅನಾವರಣಗೊಳ್ಳುವುದನ್ನು ನೋಡಲು ಕೋಟ್ಯಂತರ ಜನರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Friday 22 January 2021

ಬಿಗ್ ಬಾಸ್ ಗೆ ಕಾಲಿಡೋಕೆ ವಿಕ್ರಾಂತ್ ರೋಣ ರೆಡಿ..!!

ವಿಶ್ವಾದ್ಯಂತ ವಿಕ್ರಾಂತ್ ರೋಣ ಜ್ವರ ಜೋರಾಗಿದ್ದರೆ ಇತ್ತ ಕಿಚ್ಚನ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ರೆಡಿಯಾಗ್ತಿದೆ.

ಕಿಚ್ಚ ಕನ್ನಡ ಕಂಡ ಸ್ಟಾರ್ ಹೋಸ್ಟ್.
ಇಲ್ಲಿಯವರೆಗೆ ಯಾವ ಭಾಷೆಯಲ್ಲಿ ಸಹ ಬಿಗ್ ಬಾಸ್ ನ ಹೋಸ್ಟ್ ಆಗಿ ಇಷ್ಟೊಂದು ಸೀಸನ್ ಹೋಸ್ಟ್ ಮಾಡಿಲ್ಲ.

ಈಗ ಕಿಚ್ಚ ಸುದೀಪ್ 1 ವರ್ಷದ ವಿರಾಮದ ನಂತರ ಚಿಕ್ಕಪರದೆಯ ದೊಡ್ಡ ಶೋ ಬಿಗ್ ಬಾಸ್ ನ ಬಿಗ್ " ಬಾಸ್ " ಮರುಕಳಿಸಲು ಸಜ್ಜಾಗಿದೆ.

ಕಿಚ್ಚ ಸುದೀಪ್ ರವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಂದ " ವಿಕ್ರಾಂತ್ ರೋಣಕ್ಕೆ ತೋರಿಸಿದ ನಿಮ್ಮ ಪ್ರೀತಿಗೆ ಧನ್ಯವಾದಗಳು, ಈಗ ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟಿಂಗ್ ನಲ್ಲಿದ್ದೇನೆ " ಎಂದು ಹಂಚಿಕೊಂಡರು.

ಕನ್ನಡದಲ್ಲಿ ಬಿಗ್ ಬಾಸ್ ಗೆ ಜನಪ್ರಿಯತೆ ಬರಲು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
ವೀಕ್ಷಕರು ಸ್ಪರ್ಧಿಗಳನ್ನು ವೀಕ್ಷಿಸಲು ಬಿಗ್ ಬಾಸ್ ನೋಡದಿದ್ದರೂ , ಕಿಚ್ಚ ಸುದೀಪ್ ರವರ ಸ್ಟೈಲಿಶ್ ಹೋಸ್ಟಿಂಗ್ ನೋಡೋದಕ್ಕಾದ್ರೂ ನೋಡೇ ನೋಡ್ತಾರೆ.

ಮೂಲಗಳ ಪ್ರಕಾರ ಬಿಗ್ ಬಾಸ್ ನ 8ನೇ ಅವತರಣಿಕೆ ಇದೇ ಫೆಬ್ರವರಿಯ 3ನೇ ವಾರದಿಂದ ಪ್ರಾರಂಭವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.ಬಿಗ್ ಬಾಸ್ ಈ ಬಾರಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ದೊಡ್ಡ ಪರದೆಯಿರಲೀ ಇಲ್ಲ ಚಿಕ್ಕ ಪರದೆಯಿರಲಿ ಕಿಚ್ಚ ಸುದೀಪ್ ತಾವು ಎಂದೆಂದಿಗೂ ಬಿಗ್ ಬಾಸ್ ಎಂದು ಸಾಬೀತು ಪಡಿಸಿದ್ದಾರೆ.

ಕಿಚ್ಚನಿಗೆ 2000 ಅಡಿ ಕಟೌಟ್ ರೆಡಿ...!!!

ಫ್ಯಾಂಟಮ್ ವಿಕ್ರಾಂತ್ ರೋಣ ಆದ ಮೇಲೆ ಕಿಚ್ಚನದ್ದೇ ಸುದ್ದಿ ಇಡೀ ದೇಶದಲ್ಲಿ.

ಈಗಾಗಲೇ ವಿಕ್ರಾಂತ್ ರೋಣದ  ಟೈಟಲ್ ಲೋಗೋ ಹಾಗೂ ಚಿತ್ರದ 3ನಿಮಿಷದ ಟೀಸರ್ ನ್ನು ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡುತ್ತಿರುವ ಪ್ರಪಂಚದ ಮೊದಲ ಚಿತ್ರವಾಗೋಕೆ ಹೊರಟಿದೆ.

ಕನ್ನಡ ಚಿತ್ರರಂಗದ ಈ ಹಂತದ ಬೆಳವಣಿಗೆ ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಬೆಳವಣಿಗೆಯನ್ನು ಸೂಚಿಸಿದೆ.

ಬುರ್ಜ್ ಖಲೀಫಾದಲ್ಲಿ ಚಿತ್ರದ ಅಪ್ಡೇಟ್ ನ್ನು ಬಿಡುಗಡೆ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ.
ಆದರೆ ಕಿಚ್ಚ ಸುದೀಪ್ ನೇತೃತ್ವದ ವಿಕ್ರಾಂತ್ ರೋಣ , ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಇದನ್ನು ಸಾಧಿಸುತ್ತಿದೆಯೆಂದರೆ ಅದು ನಾವೆಲ್ಲ ಕನ್ನಡಿಗರು ಹೆಮ್ಮೆ ಪಡೋ ವಿಚಾರ.

ಇದು ಮಾತ್ರವಲ್ಲದೇ ದುಬೈನ ಬುರ್ಜ್ ಖಲೀಫಾದ ಕಟ್ಟಡದ Display ಮೇಲೆ ಕಿಚ್ಚನ 2000 ಅಡಿಗೂ ಎತ್ತರದ ಕಟೌಟ್ ಇದೇ ಡಿಸೆಂಬರ್ 31ರಂದು ಕಿಚ್ಚ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅನಾವರಣಗೊಳ್ಳುತ್ತಿರುವುದನ್ನು ನೋಡಲು ಎಲ್ಲಾ ಕನ್ನಡಿಗರ ಮಾತ್ರವಲ್ಲದೇ ಇಡೀ ಸಿನಿಜಗತ್ತು ಕಾಯುತ್ತಿದೆ.